*ಉಪ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದ ಗೃಹ ಸಚಿವ ಜಿ.ಪರಮೇಶ್ವರ್*…ರಾಜ್ಯದ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಬಡವರ ಪರವಾದ ಪಕ್ಷ.ಅವರ ಅಭಿವೃದ್ಧಿಗಾಗಿ ಗ್ಯಾರೆಂಟಿ ಯೋಜನೆ ಜಾರಿ ಮಾಡಿದ್ದೇವೆ.ಜೊತೆಗೆ ಜಿ.ಡಿ.ಪಿ ಯಲ್ಲೂ ಮುಂದಿದ್ದೇವೆ.ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನುವ ವಿಪಕ್ಷಗಳ ಹೇಳಿಕೆ ಅಷ್ಷು ಸಮಂಜಸವಲ್ಲ.ನಾವು ಮೂರು ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಇದ್ದರೂ ನಮ್ಮ ಗೆಲುವು ನಿಶ್ಚಿತ.ಗ್ಯಾರೆಂಟಿ ಯೋಜನೆ ನಮ್ಮ ಕೈ ಹಿಡಿಯಲಿವೆ ಎಂದು ಹೇಳಿದರು.
ರಾಜ್ಯದ ಜನಗಣತಿಯ ಬಗ್ಗೆ ಮಾತನಾಡಿದ ಅವರು ಜಾರಿಯಾಗಲು ಕೆಲ ತಾಂತ್ರಿಕ ಕಾರಣಗಳಿವೆ.ಅದನ್ನು ಪರಿಹರಿಸಿ ಅನುಷ್ಟಾನಗೊಳಿಸಲು ಸರ್ಕಾರ ಬದ್ದವಾಗಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದು ಪ್ರಶ್ಣೆಯೊಂದಕ್ಕೆ ಉತ್ತರಿಸಿದರು.