ನಿರ್ಮಲ ತುಂಗಭದ್ರ ಪಾವಿತ್ರ್ಯತೆ ಕಾಪಾಡುವುದು ನಮ್ಮ ಜವಾಬ್ದಾರಿ

Shivamoggavoice Editor
1 Min Read

“ನಿರ್ಮಲ ತುಂಗಭದ್ರ ಪಾವಿತ್ರ್ಯತೆ ಕಾಪಾಡುವುದು ನಮ್ಮ ಜವಾಬ್ದಾರಿ”

 

ತುಂಗಭದ್ರ ನದಿಗಳ ಪಾವಿತ್ರತೆಯನ್ನು ಕಾಪಾಡಲು, ಸಾರ್ವಜನಿಕರಲ್ಲಿ ಜಲ ಜಾಗೃತಿ ಹಾಗೂ ಸ್ವಚ್ಛತಾ ಜಾಗೃತಿಯ ಮೂಡಿಸಲು ನವಂಬರ್ ತಿಂಗಳ 6 ರಿಂದ 14ರವರೆಗೆ ಶೃಂಗೇರಿಯಿಂದ ಕಿಷ್ಕಿಂಧೆ ತನಕ ನಡೆಯುತ್ತಿರುವ “ನಿರ್ಮಲ ತುಂಗಭದ್ರ ಅಭಿಯಾನ – ಬೃಹತ್ ಜಲಜಾಗೃತಿ ಪಾದಯಾತ್ರೆ”ಯು ನವಂಬರ್ 10ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತಾ ಕುರಿತಂತೆ ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಲಾಯಿತು.

 

ನಿರ್ಮಲ ತುಂಗ-ಭದ್ರ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವ ಮೂಲಕ ತುಂಗಭದ್ರ ನದಿಗಳ ಪಾವಿತ್ರತೆಯನ್ನು ಕಾಪಾಡಬೇಕಾಗಿದೆ.

 

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾದ ಶ್ರೀ ಹೇಮಂತ್ ಕುಮಾರ್ ಅವರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪರ್ಯಾವರಣ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

Share this Article