2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376 (2) (ಎಫ್)(ಎನ್), 323, 506, 448 ಐಪಿಸಿ ಮತ್ತು ಕಲಂ 06 ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ. 

Shivamoggavoice Editor
1 Min Read

2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376 (2) (ಎಫ್)(ಎನ್), 323, 506, 448 ಐಪಿಸಿ ಮತ್ತು ಕಲಂ 06 ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.

ಪ್ರಕರಣದ ತನಿಖಾಧಿಕಾರಿಗಳಾದ *ಶ್ರೀ ಶ್ರೀಶೈಲ್ ಕುಮಾರ್ ಜೆ, ಸಿಪಿಐ* ಭದ್ರಾವತಿ ನಗರ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ *ದೋಷಾರೋಪಣಾ ಪತ್ರವನ್ನು* ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀ ಶ್ರೀಧರ್ ಹೆಚ್. ಆರ್, ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು, ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ *FTSC-1 ಶಿವಮೊಗ್ಗದಲ್ಲಿ* ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, *ಮಾನ್ಯ ನ್ಯಾಯಾಧೀಶರಾದ ಶ್ರೀ ಮೋಹನ್ ಜೆ. ಎಸ್ ರವರು* ದಿನಾಂಕಃ 07-11-2024 ರಂದು ಪ್ರಕರಣದ ಆರೋಪಿ ಭದ್ರಾವತಿ ತಾಲ್ಲೂಕಿನ 30 ವರ್ಷದ ವ್ಯಕ್ತಿಗೆ *20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 1,12,000 ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿದ್ದು, ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ *1 ಲಕ್ಷ ಮತ್ತು ಸರ್ಕಾರದಿಂದ 5 ಲಕ್ಷ ರೂಪಾಯಿಗಳನ್ನು* ನೊಂದ ಬಾಲಕಿಗೆ ನೀಡಲು ಆದೇಶಿಸಿರುತ್ತಾರೆ

Share this Article