ಕರುನಾಡ ಯುವ ಶಕ್ತಿ ಸಂಘಟನೆಯ ವತಿಯಿಂದ ದಿನಾಂಕ 24=11=2024ರ ಭಾನುವಾರ 69ನೇವರ್ಷದ ಕನ್ನಡ ರಾಜ್ಯೋತ್ಸವ ಹಾಗೂ 4ನೇ ವರ್ಷದ ವಾರ್ಷಿಕೋತ್ಸವವನ್ನು ತಾಲ್ಲೂಕು ಅಧ್ಯಕ್ಷರಾದ ಎಂ ಮುನೀರ್ ಪಾಷಾ ಹಾಗೂ ತಾಲ್ಲೂಕು ಯುವ ಘಟಕದ ಅಧ್ಯಕ್ಷ ರಾದ ಇಲಿಯಾಸ್ (ಕುಮಾರ್)ಇವರ ನೇತೃತ್ವದಲ್ಲಿ ಗುಂಡ್ಲುಪೇಟೆ ಸಿ ಎಂ ಎಸ್ ಮಕ್ಕಳ ಮನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಶ್ರೀ ವಸಂತ್ ಕುಮಾರ್ ವಹಿಸಿದ್ದರು ಸಂಸ್ಥಾಪಕ ಶರವಣ್ ರವರು ದೀಪ ಬೆಳಗಿಸಿದರು ಈ ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಸನ್ಮಾನ ಮತ್ತು ಮಕ್ಕಳ ಮನೆಯ ವಿದ್ಯಾರ್ಥಿಗಳಿಗೆ ಭೋಜನ ಕೂಟ ಏರ್ಪಡಿಸಿದ್ದರು
ಬೆಳಿಗ್ಗೆ ಪುರಸಭಾ ಬಯಲು ಮಂದಿರದಲ್ಲಿ ರಕ್ತದಾನ ಶಿಬಿರ ಬಿ.ಪಿ.ಶುಗರ್ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು ಸಭೆಯಲ್ಲಿ ಮುಖ್ಯ ಭಾಷಣಕಾರರಾದ ಶಿಕ್ಷಕ ನಂದೀಶ್ ರವರು ಮಾತನಾಡಿ ಕನ್ನಡ ನೆಲ ಜಲ ಭಾಷೆಯ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಸಾಹಿತಿಗಳಾದ ಕಾಳಿಂಗ ಸ್ವಾಮಿ ಸಿದ್ದಾರ್ಥ್ ವಹಿಸಿದ್ದರು ಈ ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಸುಭಾಷ್ ಮಾಡ್ರ ಹಳ್ಳಿ ಸೋಮಣ್ಣ ವಕೀಲರು ಆದ ಉಮೇಶ್ ಕನ್ನಡ ಪರ ಹೋರಾಟಗಾರ ದ ಬ್ರಹ್ಮಾನಂದ ನವೀನ್ ಕುಮಾರ್ ಮಕ್ಕಳ ಮನೆಯ ಮುಖ್ಯಸ್ಥ ರು ಹಾಗೂ ವಿದ್ಯಾರ್ಥಿಗಳು ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು