ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟ ಕಾಸಿಗಾಗಿ ಓಟು…ಗೆದ್ದವರು ಮಾಡೋದೇನು..!? ಭಾನುವಾರ ನಡೆದ ಸಿಟಿ ಕೋ ಆಪರೇಟಿವ್ ಚುನಾವಣೆ ಲೋಕಸಭೆ.ವಿಧಾನಸಭೆ ಚುನಾವಣೆಯನ್ನು ನಾಚಿಸುವಂತಿತ್ತು..? ಬ್ಯಾಂಕಿನ 15 ಸ್ಥಾನಗಳಿಗೆ 32 ಜನ ಸ್ಪರ್ದೆ ಮಾಡಿದ್ದು.ನಗರದಲ್ಲೆಡೆ ಪ್ಲೆಕ್ಸಿಗಳ ಹಾವಳಿ.ಚುನಾವಣೆಯಲ್ಲಿ ಮತಗಳಿಸಲು ಅಭ್ಯರ್ಥಿಗಳು ಒಂದು ಮತಕ್ಕೆ ₹ 1000/500/ 300 ಕೊಟ್ಟು ಮತ ಹಾಕಿಸಿಕೊಂಡು ಗೆದ್ದಿರುವುದು ಗುಟ್ಟಾಗಿ ಉಳಿದಿಲ್ಲ..ಅದರಲ್ಲೂ ಹಳಬರು ತಮ್ಮ ಪಾರುಪತ್ಯ.ಇಮೇಜ್ ಉಳಿಸಿಕೊಂಡು ರಾಜಕೀಯದಲ್ಲಿ ಬೆಳೆಯುವ ಸಲುವಾಗಿ ಹಣ ಖರ್ಚು ಮಾಡಿದ್ದಾರೆನ್ನಲಾದರೂ. ಕಾಸು ಕೊಟ್ಟು ಓಟು ಹಾಕಿಸಿಕೊಂಡು ಗೆದ್ದ ಮಹನೀಯರು ಸಹಕಾರ ಕ್ಷೇತ್ರವನ್ನು ಭ್ರಷ್ಟಾಚಾರದ ಕೂಪಕ್ಕೆ ನೂಕಿದ್ದೇವಾ…? ಸಾಧಿಸುವುದೇನು..? ಸದಸ್ಯರಿಗೆ ಯಾವ ನ್ಯಾಯ ದೊರಕಿಸಿಕೊಡುವಿರಿ? ಸಂಸ್ಥೆಯ ಹಿತ ಕಾಯುತ್ತೇವೆಯಾ..? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ..?