ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ATM ನಲ್ಲಿ ಯಾರೋ ಒಬ್ಬ ಕಳ್ಳನು ATM ಬಾಗಿಲು ಎಳೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದಾನೆ

Shivamoggavoice Editor
1 Min Read

 

 

ದಿನಾಂಕಃ 26-01-2025 ರಂದು ರಾತ್ರಿ ಶಿವಮೊಗ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ATM ನಲ್ಲಿ ಯಾರೋ ಒಬ್ಬ ಕಳ್ಳನು ATM ಬಾಗಿಲು ಎಳೆದು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾನೆಂದು, ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0015/2025 ಕಲಂ 331(4) ಮತ್ತು 62 BNS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

 

ಸದರಿ ಪ್ರಕರಣದಲ್ಲಿ ಆರೋಪಿತನ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ ಜಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಹರೀಶ್ ಕೆ ಪಟೇಲ್ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಶ್ರೀ ಸಂತೋಷ್ ಭಾಗೋಜಿ, ಪಿಎಸ್ಐ, ಕೋಟೆ ಪೊಲೀಸ್ ಠಾಣೆ , ಶ್ರೀ ಹರ್ಷ ಎಎಸ್ಐ ಮತ್ತು ಸಿಬ್ಬಂಧಿಗಳಾದ ಸಿಪಿಸಿ ಕಿಶೋರ್, ಆಂಜಿನಪ್ಪ, ಕಾಂತರಾಜ್ ಮತ್ತು ಪ್ರಕಾಶ್ ಹಾಗೂ ಇಲಾಖಾ ವಾಹನದ ಚಾಲಕರಾದ *ಸೋಮು ಎಪಿಸಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

 

ಸದರಿ ತನಿಖಾ ತಂಡವು ಕೂಡಲೇ ಕಾರ್ಯಪ್ರೌವೃತ್ತರಾಗಿ, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿ ಮಹಮ್ಮದ್ ವಸೀಂ ಬಿನ್ ಅಲೀ ಹಸನ್, 22 ವರ್ಷ, ಕಾಂಕ್ರೀಟ್ ಕೆಲಸ, ಜಲೈ ಗ್ರಾಮ, ಸಮಾನಿ ತಾಲ್ಲೂಕು ಸಾರಸ್ ಜಿಲ್ಲೆ, ಬಿಹಾರ ರಾಜ್ಯ ಈತನನ್ನು ದಸ್ತಗಿರಿ ಮಾಡಲಾಗಿರುತ್ತದೆ.

 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Share this Article