ರಾಜ್ಯಸಭಾ ಸದಸ್ಯತ್ವದಿಂದ ಮಲ್ಲಿಕಾರ್ಜುನ ಖರ್ಗೆ ಅಮಾನತುಗೊಳಿಸಿ-ಬಿಜೆಪಿ ಮಹಿಳಾ ಘಟಕ ಆಗ್ರಹ

Shivamoggavoice Editor
1 Min Read

ಮಹಾಕುಂಭ ಮೇಳದ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನ ಅನುರ್ಜಿತಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದ ನಗರ ಘಟಕ ಡಿಸಿಗೆ ಮನವಿ ಸಲ್ಲಿಸಿದೆ.

 

ಗಂಗೆಯಲ್ಲಿ ಮುಳುಗುವುದರಿಂದ ಬಡತನ ನಿರ್ಮೂಲನ ಆಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂದೂಗಳ ಭಾವನೆಗೆ ದಕ್ಕೆ ತರುವಂತಾಗಿದೆ. ಅದೂ ಅಲ್ಲದೆ ಬಿಹೆಪಿಯವರನ್ನ ದೇಶದ್ರೋಹಿ ಎಂದು ಹೇಳಿಕೆ ನೀಡಿರುವುದನ್ನ ಸಂಘಟನೆ ಖಂಡಿಸಿದೆ.

 

ಹೈಕಮಾಂಡ್ ಓಲೈಕೆಗೋಸ್ಕರ ಬಹುಸಂಖ್ಯಾತ ಹಿಂದೂಗಳ ಭಕ್ತಿ ಶ್ರದ್ಧೆ ನಂಬಿಕೆ ಬಗ್ಗೆ ಟೀಕಿಸುವ ಬರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ. ಆದುದರಿಂದ ರಾಜ್ಯ ಸಭಾ ಸದಸ್ಯರಾದ ಖರ್ಗೆ ಅವರನ್ನ ಅನೂರ್ಜಿತ ಗೊಳಿಸುವಂತೆ ಸಂಘಟನೆ ಆಗ್ರಹಿಸಿದೆ.

 

ರಶ್ಮಿ ಶ್ರೀನಿವಾಸ್ ಯಶೋಧ ವೈಷ್ಣವ್, ಶಾಂತ ಸುರೇಂದ್ರ, ತಶೋಧ ಭೋಗೇಶ್ ಅನಿಲ ಮೋಹನ್, ನಿರ್ಮಲ, ರಾಜೇಶ್ವರಿ, ಚೃತ್ರ ಪೈ, ರಾಧಮ್ಮ,  ಪದ್ಮಶ್ರೀ, ಸರಿತಾ, ರೇಖಾ, ಧನಲಕ್ಷ್ಮೀ ಶಾರದಾ, ನಂದಿನಿ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Share this Article