ವಿನೋಬನಗರದ ಕಲ್ಲಹಳ್ಳಿ ಸರ್ವೆನಂಬರ್ 113/13 ಜಾಗಕ್ಕೆ ಸೇವಿಯರ್ ವರ್ಗೀಸ್ ಕಣ್ಣು

Shivamoggavoice Editor
1 Min Read

ವಿನೋಬನಗರದ ಕಲ್ಲಹಳ್ಳಿ ಸರ್ವೆನಂಬರ್ 113/13 ಜಾಗ ನ್ಯಾಯಾಲಯದಲ್ಲಿದ್ದರೂ ಈ ಜಾಗದಲ್ಲಿ ಶೆಡ್ ನಿರ್ಮಿಸಲಾಗಿದೆ. 1 ಕಾಲು ಎಕರೆಗಿಂತ ಹೆಚ್ಚಿಗೆ ಇರುವ ಜಾಗ ನ್ಯಾಯಾಲಯದಲ್ಲಿದ್ದರೂ ಈ ಜಾಗಕ್ಕೆ ಕಣ್ಣು ಹಾಕಲಾಗಿದೆ ಎಂದು ಮಾಲೀಕ ಪಿ.ಮಂಜುನಾಥ್ ಆರೋಪಿಸಿದ್ದಾರೆ.

 

ಈ ಜಾಗವನ್ನ ಸೇವಿಯರ್ ವರ್ಗೀಸ್ ಅವರಿಂದ 17 ಲಕ್ಷಕ್ಕೆ ಖರೀದಿಸಿದ್ದು ನಂತರ ಸೇವಿಯರ್ ವರ್ಗಿಸ್ ಅವರು ತನ್ನದೆಂದು ಕ್ಲೈಮ್ ಮಾಡಿಕೊಳ್ಳಲಾರಂಭಿಸಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆಗಳನ್ನ ಹೂಡಲಾಗಿದೆ.

 

ಪ್ರಕರಣ ನ್ಯಾಯಾಲಯದಲ್ಪಿದ್ದರೂ ಸಹ ಸೇವಿಯರ್ ನಮ್ಮ ಭೂಮಿಯ ಮೇಲೆ ಕಣ್ಣುಹಾಕಿ ಶೆಡ್ ನಿರ್ಮಿಸಿದ್ದಾರೆ. ಕಾಂಪೌಂಡ್ ಗೆ ಬಣ್ಣ ಬಳಿಸಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು ಪಿಐ ಕ್ರಮ ಜರುಗಿಸುತ್ತಿಲ್ಲ. ಎಸ್ಪಿಯವರು ತಿಳಿಸಿದರೂ ಸಹ ಮೇಲಧಿಕಾರಿಗಳ ಸೂಚನೆಯನ್ನ ಪಾಲಿಸುತ್ತಿಲ್ಲ. ಎದುರಾಳಿಗಳಿಂದ ಲಂಚ ಪಡೆದು ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.

Share this Article